ಮಂಗ ಹೆಂಗಸಿವಳು

ಮಂಗ ಹೆಂಗಸಿವಳಂಗಳದೀ ಎಪ್ಪಾ
ಹಿಂಗದೆ ಬಂದಲ್ಲ್ಹ್ಯಾಂಗಾದಿ ||ಪ||

ಕೊಂಗಿ ಮಾತನಾಡಿ ಹೆಂಗಸರ ಕಂಡರೆ
ಮುಂಗಡಿಯಲಿ ಕೆಟ್ಟವಳಾದಿ
ಮಾಟಗೇಡಿ ಮಡಸಿಯ ಮನಿಯು
ದಾಟಬೇಕು ಮನ್ಮಥ ಬೆಣಿಯು
ರಾಟಿಯ ನೂಲುವ ಪೋಟಿಯ ಹೇಳುತಲಿ
ಸೀಟಕತನಗೊಳಗಾಗಿ ||೧||

ಕೆಟ್ಟ ಹೆಣ್ಣು ಇವಳು ಬೆದಗಡಿಕಿ
ಇಟ್ಟಳು ಕೆಟ್ಟ ಗುಣದ ಹಳೆ ಕಟಗಡಕಿ
ಕಿಟ್ಟದಗೊಂಬಿಹಾಂಗ ತೆರೆದು ಕಾಣತಾಳು ಇವಳಂಗದಿ||೨||

ಹುಶಾರಿ ನಡಿಯೋ ಈ ದಾರಿ
ಶವಿವಿಡಿದು ನಡಿಯೋ ತಳವಾರಗೇರಿ
ಕೊಳಕ ಲವಡಿ ನಮ್ಮತ್ತಿವಳಿಕಿ ಅರಿಯದೆ
ಹೊಯ್ಯಿಮಾಲಿಗೆ ಬಂದು ಒಳಗಾಗಿ ||೩||

ಬಾಯಿಮುಚ್ಚಿಕೋ ಅಂದರು ನಿಮಗ
ಯಾಕಾರ ಬಂದೆವಪ್ಪ ನಾವೀಗ
ನಾಯಿಹಾಂಗ ಬೊಗಳ್ಯಾಡುವಳಿವಳು
ತಾಯಿ ಹೇಳಿ ಕಲಿಸಿದ ಬುದ್ಧಿ ||೪||

ಶಿಶುನಾಳಧೀಶನ ಕಂದಾ
ಹೊಸದಾಗಿ ಆ ಮಾರ್ಗದಿ ಬಂದಾ
ಕೊಸರಿದರಾಕಿಯು ಹೋಗದಿರು ತಮ್ಮಾ
ಉಸುರುವೆ ಕವಿ ತಾಪದಿ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನೆಂಬ ಹುಡುಕಾಟ
Next post ಸೂರ್ಯನುರಿದ ಭೂಮಿಗೆ ತಂಪನೆರೆದ ಚಂದಿರ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

cheap jordans|wholesale air max|wholesale jordans|wholesale jewelry|wholesale jerseys